Friday 31 July 2015

ಗ್ರಾಮಾರಣ್ಯ ಯೋಜನೆ ಹಾಗೂ ಪ್ರತಿಭಾ ಪುರಸ್ಕಾರ
                ದಿನಾಂಕ ೩೦-೭-೧೫ರಂದು ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮವು ಯಂ . ಪಿ . ಟಿ . ಎ . ಅಧ್ಯಕ್ಷೆ ಅಜಿತಾ ಪೆಲ್ತಾಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು . ಪಿ . ಟಿ . ಎ . ಸದಸ್ಯರಿಗೆ ಗಿಡಗಳನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು . ಹಾಗೂ ಊರ ಪರಿಸರ ಪ್ರೇಮಿಗಳಿಗೂ ಗಿಡಗಳನ್ನು ನೀಡಲಾಯಿತು . ಶಾಲಾವತಿಯಿಂದ ನಡೆಯುವ ಈ ಕಾರ್ಯಕ್ರಮ ಮೂರನೇ ವರ್ಷಕ್ಕೆ ಪಾದಾರ್ಪಣೆ ಗೊಂಡಿದೆ .  

                   ಕಳೆದ ವರ್ಷದ L .S .S .ಸ್ಕಾಲರ್ ಶಿಪ್ ಅರ್ಹತೆಯನ್ನು ಪಡೆದ ನಮ್ಮ ಶಾಲೆಯ ಪ್ರತಿಭಾವಂತ ವಿಧ್ಯಾರ್ಥಿ ಅರ್ಪಿತಾ . ಪಿ ಇವರನ್ನುಶಾಲಾವತಿಯಿಂದ ಗೌರವಿಸಲಾಯಿತು . ಮುಖ್ಯ ಅತಿಥಿ ಶ್ರೀ ಕೃಷ್ಣ ಪೆಳ್ತಾಜೆ ಹಾಗೂ ನಿವೃತ್ತ ಅಧ್ಯಾಪಕಿ ಶ್ರೀಮತಿ ಜಯಂತಿ ವೈ ನೆನಪಿನ ಕಾಣಿಕೆ ಹಾಗು ನಗದು ಬಹುಮಾನವನ್ನು ನೀಡಿದರು .













          

Sunday 26 July 2015

             ತರಕಾರಿ ತೋಟ ನಿರ್ಮಾಣಕ್ಕೆ ಶ್ರಮದಾನ 

ನಮ್ಮ ಶಾಲೆಯ ಅಂಗಳದಲ್ಲಿ ತರಕಾರಿ ಹಾಗು ಕೃಷಿ ತೋಟ ನಿರ್ಮಾಣಕ್ಕಾಗಿ ಧ . ಗ್ರಾ.  ಯೋಜನೆಯಬೇಂಗಪದವು ಘಟಕ ಹಾಗು ಶಾಲಾ ಶಿಕ್ಷಕ-ರಕ್ಷಕ ಸಂಘದ ಆಶ್ರಯದಲ್ಲಿ ಶ್ರಮದಾನ ನಡೆಯಿತು . ಕಾರ್ಯಕ್ರಮವನ್ನು ಧ . ಗ್ರಾ . ಯೋಜನೆಯ ಮೇಲ್ವಿಚಾರಕ ಮೋಹನ ಉದ್ಘಾಟಿಸಿದರು . ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಯಸ್ . ಅಧ್ಯಕ್ಷತೆ ವಹಿಸಿದ್ದರು . ಧ . ಗ್ರಾ . ಬೇಂಗಪದವು ಒಕ್ಕೂಟ ಅಧ್ಯಕ್ಷ ಜಯರಾಜ ,ಸೇವಾ ಪ್ರತಿನಿಧಿ ಶಶಿಕಲಾ ಉಪಸ್ಥಿತರಿದ್ದರು . ಯಂ . ಪಿ . ಟಿ . ಎ ಅಧ್ಯಕ್ಷೆ ಅಜಿತಾ ಪೆಲ್ತಾಜೆ ಭಾಗವಹಿಸಿದರು . 



                 

Saturday 18 July 2015

    ಹೆತ್ತವರ  ಮಹಾಸಭೆ -16-07-15

ಶ್ರೀ ಗಿರಿಜಾಂಬಾ ಎ ಯಲ್ ಪಿ ಶಾಲೆಯಲ್ಲಿ ದಿನಾಂಕ ೧೬-೦೭-೧೫ರಂದು ಪಿ ಟಿ ಎ ಮಹಾಸಭೆ ಜರಗಿತು .ನೂತನ ಪಿ ಟಿ ಎ ಅಧ್ಯಕ್ಷ ರಾಗಿ ಶ್ರೀ ಚಂದ್ರಹಾಸ ಕಲ್ಲರೋಡಿ ಪುನರಾಯ್ಕೆ ಗೊಂಡರು . ಪಿ ಟಿ ಎ ಉಪಾಧ್ಯಕ್ಷರಾಗಿ ಶ್ರೀ ಕೃಷ್ಣಪ್ಪ ನಾಯ್ಕ ಆಯ್ಕೆ ಗೊಂಡರು . ಯಂ ಪಿ ಟಿ ಎ ಅದ್ಯ್ಹಕ್ಷೆಯಾಗಿ ಶ್ರೀಮತಿ ಅಜಿತಾ ಪೆಲ್ತಾಜೆ ಹಾಗು ಉಪಾಧ್ಯಕ್ಷೆಯಾಗಿ ಶ್ರೀಮತಿ ಜಯಲಕ್ಷ್ಮಿ ಬೇಂಗಪದವು ಪುನರಾಯ್ಕೆ ಗೊಂಡರು . ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಭಾಗವಹಿಸಿದರು .