Tuesday 13 January 2015

ಶಾಲಾ ಅಭಿವೃದ್ಧಿ ಸೆಮಿನಾರ್ ಮತ್ತು Focus 2015ರ ಉದ್ಘಾಟನೆ  

             ದಿನಾಂಕ 13-01-2015 ಮಂಗಳವಾರ                            
ಸರ್ವ ಶಿಕ್ಷಾ ಅಭಿಯಾನದ ಅಂಗವಾಗಿ ನಡೆಯುವಂತಹ Focus 2015ರ ಪ್ರಯುಕ್ತ ವಿದ್ಯಾಲಯ ಅಭಿವೃದ್ಧಿ ಯೋಜನೆಗಳ ಮುಕ್ತ ಚರ್ಚಾ ಕೂಟ,ಹಾಗು ಶಾಲಾ ಅಭಿವೃದ್ಧಿ ಮಾದರಿ ಯೋಜನೆಯನ್ನು ನಿರ್ದೇಶಿಸುವ ಸಲುವಾಗಿಯೂ ಶಾಲಾ ಅಭಿವೃದ್ಧಿ ಸೆಮಿನಾರ್ ಜರಗಿತು . ಅದರೊಂದಿಗೆ Focus 2015ರ ಶಾಲಾ ಮಟ್ಟದ ಉದ್ಘಾಟನೆ ಕೂಡ ನಡೆಯಿತು . ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತಿನ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಎಸ್. ಗಾಂಭೀರ ವಹಿಸಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎಣ್ಮಕಜೆ ಪಂಚಾಯತಿನ ಅಧ್ಯಕ್ಷರಾದ ಶ್ರೀ ಸೋಮಶೇಖರ ಜೆ.ಎಸ್ ನೆರವೆರಿಸಿದರು. ಕಾರ್ಯಕ್ರಮದಲ್ಲಿ  BRC Trainer ಗಳಾದ ಶ್ರೀಮತಿ ಕಾರ್ಮಿಲಿ ,ಶ್ರೀ ಯೂಸಫ್ ಸರ್ ಭಾಗವಹಿಸಿದ್ದರು .