Tuesday 11 August 2015

                

                      ಮಕ್ಕಳ ತರಕಾರಿ ಮೇಳ -ದಿನಾಂಕ 11-8-15

 

ಶಾಲಾ MPTA ಅಧ್ಯಕ್ಷೆ ಅಜಿತಾ ಪೆಲ್ತಾಜೆಯವರ ಅಧ್ಯಕ್ಷತೆಯಲ್ಲಿ ನಡೆದ ಮೇಳವನ್ನು ಬಾಲಪ್ರಭಾ  AUP ಶಾಲೆ ಕಾಟು ಕುಕ್ಕೆ ಯಮುಖ್ಯ ಶಿಕ್ಷಕ  ಶ್ರೀ ಪತಿ ಭಟ್ ಉದ್ಘಾಟಿಸಿದರು . ಇವರು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸೊಪ್ಪು ತರಕಾರಿ ,ಗೆಡ್ಡೆ ತರಕಾರಿಗಳ ಪಾಮುಖ್ಯತೆಯ ಬಗ್ಗೆ ಮಕ್ಕಳೊಂದಿಗೆ ಸಂವಾದ ನಡೆಸಿದರು . ತರಕಾರಿ ಮೇಳದಲ್ಲಿ ಸುಮಾರು ಎಂಬತ್ತಾರಷ್ಟು ವಿಧಧ ತರಕಾರಿಗಳು ಸೇರಿವೆ .  ಮಕ್ಕಳು ಊರ ತರಕಾರಿ ಮತ್ತು ಪರ ಊರಿನತಕಾರಿಗಳನ್ನು ಗುರುತಿಸಿ ವರ್ಗೀಕರಣ ಚಟುವಟಿಕೆ ನಡೆಸಿದರು . ಮೇಳದಲ್ಲಿ ಪ್ರದರ್ಶನ ಗೊಂಡ ತರಕಾರಿಗಳಿಂದ ವೈವಿಧ್ಯ ಸಾರು ,ಸಾಂಬಾರು ,ಪಲ್ಯ ಗಳಾಗಿ ಮಧ್ಯಾಹ್ನ್ನದ ಊಟ ಕ್ಕೆ ಸೇರಿಸಿ ಕೊಳ್ಳಲಾಯಿತು . 

 

ಮುಖ್ಯ ಅತಿಥಿ ಗಳಿಂದ ಉದ್ಘಾಟನೆ




ಮೇಳದಲ್ಲಿ ಸೊಪ್ಪು ತರಕಾರಿಗಳು

ಮೇಳದಲ್ಲಿ ಗೆಡ್ಡೆ ತರಕಾರಿಗಳು

ಮೇಳದಲ್ಲಿ ಇತರ ತರಕಾರಿಗಳು


ಮೇಳದಲ್ಲಿ ತನ್ನ ಗೆಳೆಯರನ್ನು ಹುಡುಕುವ ಮಕ್ಕಳು

ಮುಖ್ಯ ಅತಿಥಿಯೊಂದಿಗೆ ಸಂವಾದ

ಮೇಳದಲ್ಲಿ ಮಕ್ಕಳ ಚಟುವಟಿಕೆ

 

 

 

 

       

Friday 31 July 2015

ಗ್ರಾಮಾರಣ್ಯ ಯೋಜನೆ ಹಾಗೂ ಪ್ರತಿಭಾ ಪುರಸ್ಕಾರ
                ದಿನಾಂಕ ೩೦-೭-೧೫ರಂದು ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮವು ಯಂ . ಪಿ . ಟಿ . ಎ . ಅಧ್ಯಕ್ಷೆ ಅಜಿತಾ ಪೆಲ್ತಾಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು . ಪಿ . ಟಿ . ಎ . ಸದಸ್ಯರಿಗೆ ಗಿಡಗಳನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು . ಹಾಗೂ ಊರ ಪರಿಸರ ಪ್ರೇಮಿಗಳಿಗೂ ಗಿಡಗಳನ್ನು ನೀಡಲಾಯಿತು . ಶಾಲಾವತಿಯಿಂದ ನಡೆಯುವ ಈ ಕಾರ್ಯಕ್ರಮ ಮೂರನೇ ವರ್ಷಕ್ಕೆ ಪಾದಾರ್ಪಣೆ ಗೊಂಡಿದೆ .  

                   ಕಳೆದ ವರ್ಷದ L .S .S .ಸ್ಕಾಲರ್ ಶಿಪ್ ಅರ್ಹತೆಯನ್ನು ಪಡೆದ ನಮ್ಮ ಶಾಲೆಯ ಪ್ರತಿಭಾವಂತ ವಿಧ್ಯಾರ್ಥಿ ಅರ್ಪಿತಾ . ಪಿ ಇವರನ್ನುಶಾಲಾವತಿಯಿಂದ ಗೌರವಿಸಲಾಯಿತು . ಮುಖ್ಯ ಅತಿಥಿ ಶ್ರೀ ಕೃಷ್ಣ ಪೆಳ್ತಾಜೆ ಹಾಗೂ ನಿವೃತ್ತ ಅಧ್ಯಾಪಕಿ ಶ್ರೀಮತಿ ಜಯಂತಿ ವೈ ನೆನಪಿನ ಕಾಣಿಕೆ ಹಾಗು ನಗದು ಬಹುಮಾನವನ್ನು ನೀಡಿದರು .













          

Sunday 26 July 2015

             ತರಕಾರಿ ತೋಟ ನಿರ್ಮಾಣಕ್ಕೆ ಶ್ರಮದಾನ 

ನಮ್ಮ ಶಾಲೆಯ ಅಂಗಳದಲ್ಲಿ ತರಕಾರಿ ಹಾಗು ಕೃಷಿ ತೋಟ ನಿರ್ಮಾಣಕ್ಕಾಗಿ ಧ . ಗ್ರಾ.  ಯೋಜನೆಯಬೇಂಗಪದವು ಘಟಕ ಹಾಗು ಶಾಲಾ ಶಿಕ್ಷಕ-ರಕ್ಷಕ ಸಂಘದ ಆಶ್ರಯದಲ್ಲಿ ಶ್ರಮದಾನ ನಡೆಯಿತು . ಕಾರ್ಯಕ್ರಮವನ್ನು ಧ . ಗ್ರಾ . ಯೋಜನೆಯ ಮೇಲ್ವಿಚಾರಕ ಮೋಹನ ಉದ್ಘಾಟಿಸಿದರು . ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಯಸ್ . ಅಧ್ಯಕ್ಷತೆ ವಹಿಸಿದ್ದರು . ಧ . ಗ್ರಾ . ಬೇಂಗಪದವು ಒಕ್ಕೂಟ ಅಧ್ಯಕ್ಷ ಜಯರಾಜ ,ಸೇವಾ ಪ್ರತಿನಿಧಿ ಶಶಿಕಲಾ ಉಪಸ್ಥಿತರಿದ್ದರು . ಯಂ . ಪಿ . ಟಿ . ಎ ಅಧ್ಯಕ್ಷೆ ಅಜಿತಾ ಪೆಲ್ತಾಜೆ ಭಾಗವಹಿಸಿದರು . 



                 

Saturday 18 July 2015

    ಹೆತ್ತವರ  ಮಹಾಸಭೆ -16-07-15

ಶ್ರೀ ಗಿರಿಜಾಂಬಾ ಎ ಯಲ್ ಪಿ ಶಾಲೆಯಲ್ಲಿ ದಿನಾಂಕ ೧೬-೦೭-೧೫ರಂದು ಪಿ ಟಿ ಎ ಮಹಾಸಭೆ ಜರಗಿತು .ನೂತನ ಪಿ ಟಿ ಎ ಅಧ್ಯಕ್ಷ ರಾಗಿ ಶ್ರೀ ಚಂದ್ರಹಾಸ ಕಲ್ಲರೋಡಿ ಪುನರಾಯ್ಕೆ ಗೊಂಡರು . ಪಿ ಟಿ ಎ ಉಪಾಧ್ಯಕ್ಷರಾಗಿ ಶ್ರೀ ಕೃಷ್ಣಪ್ಪ ನಾಯ್ಕ ಆಯ್ಕೆ ಗೊಂಡರು . ಯಂ ಪಿ ಟಿ ಎ ಅದ್ಯ್ಹಕ್ಷೆಯಾಗಿ ಶ್ರೀಮತಿ ಅಜಿತಾ ಪೆಲ್ತಾಜೆ ಹಾಗು ಉಪಾಧ್ಯಕ್ಷೆಯಾಗಿ ಶ್ರೀಮತಿ ಜಯಲಕ್ಷ್ಮಿ ಬೇಂಗಪದವು ಪುನರಾಯ್ಕೆ ಗೊಂಡರು . ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಭಾಗವಹಿಸಿದರು .

Tuesday 30 June 2015

              ತರಗತಿ ಸಭೆ - ದಿನಾಂಕ  30-06-2015 

ಪ್ರತಿ ತರಗತಿಯಲ್ಲಿ ಸಿ .ಪಿ ಟಿ ಎ ಸಭೆ ಜರಗಿತು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು . 


Wednesday 24 June 2015

ವಾಚನಾ ವಾರ ದ ಅಂಗವಾಗಿ ತರಗತಿಯಲ್ಲಿ ನಡೆದ ಚಟುವಟಿಕೆಗಳು  

ಮಕ್ಕಳಿಗೆ ವಾಚನವಾರದ ಅಂಗವಾಗಿ ವಿವಿಧ ಪುಸ್ತಕಗಳನ್ನು ನೀಡಿ ಕಥೆ ,
ಪದ್ಯ ,ಚಿತ್ರ ,ಸಂಭಾಷಣೆ ,ಹೀಗೆ ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿ ತರಗತಿಯಲ್ಲಿ ಪ್ರದರ್ಶಿಸಲಾಯಿತು . 






Monday 15 June 2015

                           ಒಂದನೇ  ತರಗತಿ -ಮಾತೆಯರ ಸಂಗಮ 
ಒಂದನೇ ತರಗತಿಯ ಹೆತ್ತವರ ಸಭೆಯನ್ನು ಕರೆಯಲಾಯಿತು . ಸಿ ಪಿ ಟಿ ಎ ಅಧ್ಯಕ್ಷೆ ಯಾಗಿ ಶ್ರೀಮತಿ ಶ್ರೀಲತಾ ಕುರೆಡ್ಕ ಆಯ್ಕೆಯಾ ಗಿದ್ದಾರೆ.  

               ಬಿ . ಆರ್ . ಸಿ ಯಿಂದ  ಶಾಲೆ ಸಂದರ್ಶನ 

ಬಿ ಆರ್ ಸಿ   ಯ ಲಕ್ಷ್ಮಿಪ್ರಿಯ ಸರ್ ೧ನೇ ತರಗತಿಗೆ ಭೇಟಿ ನೀಡಿ ,
ಒಂದೆರಡು  ಚಟುವಟಿಕೆ ಯನ್ನು ನೀಡಿದರು . 

Tuesday 9 June 2015


         ವಿಶ್ವ ಪರಿಸರ ದಿನಾಚರಣೆ 

ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರೊಂದಿಗೆ ಆಚರಿಸಲಾಯಿತು . ಮಕ್ಕಳು ಹೆತ್ತವರ ಸಹಾಯದೊಂದಿಗೆ ನುಗ್ಗೆ ಗಿಡವನ್ನು ನೆಟ್ಟರು . ಸುಂದರ ಪರಿಸರದ ಚಿತ್ರ ಮಾಡಲು ಮಕ್ಕಳಿಗೆ ಕಲಿಸಲಾಯಿತು . ಪರಿಸರ ಗೀತೆಯನ್ನು ಹಾಡಿಸಲಾಯಿತು .